Saturday 29 January 2022

ನೀಡು ಶಿವ ನೀಡದಿರು ಶಿವ


 ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ||
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ
ನೀನಿತ್ತ ಕಾಯ ನಿನ ಕೈಲಿ ಮಾಯ
ಆಗೋದು ಹೋಗೋದು ನಾ ಕಾಣೆನೆ||
ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ
ನಾನಂತೂ ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ ||

No comments:

Post a Comment